ಕೇರಳ: ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ ಹಜ್ ಯಾತ್ರಾರ್ಥಿಗಳ ಮೊದಲನೆ ತಂಡ

ಕೇರಳ : ಸೌದಿ ಅರೇಬಿಯಾದ ಮದೀನಾಕ್ಕೆ ಹಜ್ ಯಾತ್ರಾರ್ಥಿಗಳ ಮೊದಲನೆ ಬ್ಯಾಚ್ ನ ಮೊದಲ ವಿಮಾನ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು. ಕೇರಳದ ವಕ್ಫ್ ಮತ್ತು ಹಜ್ ಯಾತ್ರೆಯ ಸಚಿವರಾದ ವಿ ಅಬ್ದುರಹಿಮಾನ್ ಅವರು ಧ್ವಜಾರೋಹಣ ಮಾಡುವ ಮೂಲಕ ಮೊದಲನೆ ಬ್ಯಾಚ್ ಅನ್ನು ಬೀಳ್ಕೊಟ್ಟರು. ಸೌದಿ ಅರೇಬಿಯ ಏರ್‌ಲೈನ್ಸ್‌ನ ಎಸ್ ವಿ 5747 ವಿಮಾನದಲ್ಲಿ 377 ಪ್ರಯಾಣಿಕರು ಹಜ್ ಯಾತ್ರೆಗೆ ಹೊರಟಿದ್ದಾರೆ.  “ಭಾರತೀಯ ಹಜ್ ಯಾತ್ರಿಕರ ಮೊದಲ ಬ್ಯಾಚ್ ಇಂದು ಹೊರಟಿದೆ ಮತ್ತು ಕೊನೆಯ ವಿಮಾನ […]