ದಕ್ಷ ಅಧಿಕಾರಿಯ ಅಂತಿಮ ದರ್ಶನಕ್ಕೆ ಕಣ್ಣೀರಾದ ಯಡಾಡಿ:ಹುಟ್ಟೂರ ಮಣ್ಣಲ್ಲಿ ಮಧುಕರ್ ಶೆಟ್ಟಿ ಲೀನ
ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಲೋಕ ಬಿಟ್ಟು ಹೋಗಿಲ್ಲ, ಹುಟ್ಟೂರ ಮಣ್ಣಲ್ಲೇ ಇದ್ದಾರೆ ಮತ್ತೆ ಹುಟ್ಟಿ ಬಂದೇ ಬರುತ್ತಾರೆ ಎಂದು ಕಣ್ಣೀರಾಗುತ್ತ ಯಡಾಡಿ ಭಾನುವಾರ ಮತ್ತಷ್ಟು ಮೌನವಾಯಿತು. ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥೀವ ಶರೀರದ ಅಂತಿಮ ಸಂಸ್ಕಾರ ಹುಟ್ಟೂರಾದ ಯಡಾಡಿ-ಮತ್ಯಾಡಿಯ ಮನೆಯಲ್ಲಿ ಭಾನುವಾರ ನೆರವೇರಿತು. ಬೆಳಿಗ್ಗೆ ೮ ಗಂಟೆಗೆ ಮಧುಕರ್ ಶೆಟ್ಟಿಯವರ ಪಾರ್ಥೀವ ಶರೀರ ಯಡಾಡಿ ಮತ್ಯಾಡಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. […]