ಕುಂದಾಪುರ: ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ನಿವಾಸದಲ್ಲಿ ಪುಣ್ಯ ಸ್ಮರಣೆ
ಕುಂದಾಪುರ : ಕಳೆದ ವರ್ಷ ಹೈದರ್‌ಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಕರ್ನಾಟಕದ ದಕ್ಷ ಪೊಲೀಸ್ ಐಪಿಎಸ್ ಅಧಿಕಾರಿ ದಿ.ಮಧುಕರ ಶೆಟ್ಟಿಯವರ ಯಡಾಡಿಮತ್ಯಾಡಿಯ ಮನೆಯಲ್ಲಿ ಅವರ ಕುಟುಂಬ ಸದಸ್ಯರು ಶನಿವಾರ ಅತ್ಯಂತ ಸರಳವಾಗಿ ನಿಧನದ ವಾರ್ಷಿಕ ಪುಣ್ಯ ಸ್ಮರಣೆ ಮಾಡಿದರು. ತಂದೆ ದಿ.ವಡ್ಡರ್ಸೆ ರಘುರಾಮ ಶೆಟ್ಟಿ ಹಾಗೂ ತಾಯಿ ದಿ.ಪ್ರಫುಲ್ಲಾ ಶೆಟ್ಟಿಯವರ ಸಮಾಧಿಯ ಬಳಿಯಲ್ಲಿ ಮಾಡಲಾದ ದಿ.ಮಧುಕರ ಶೆಟ್ಟಿವರ ಸಮಾಧಿಗೆ ಶನಿವಾರ ಬೆಳಿಗ್ಗೆ ಕುಟುಂಬ ಸದಸ್ಯರು ಪುಷ್ಟಗಳನ್ನು ಅರ್ಪಿಸಿ ನಮನಗಳನ್ನು ಸಲ್ಲಿಸಿದರು. ಬೆಂಗಳೂರಿನ ಕಾಲೇಜು ದಿನಗಳ […]