ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮಾತಿನ ಚಕಮಕಿ ಪ್ರಕರಣ: ಪಂದ್ಯದ ಶುಲ್ಕದ 100% ದಂಡ ವಿಧಿಸಿದ ಬಿಸಿಸಿಐ

ಸೋಮವಾರ ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಮತ್ತು ನವೀನ್-ಉಲ್-ಹಕ್ ವಿರುದ್ಧ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಕೊಹ್ಲಿ, ಗಂಭೀರ್ ಅವರು ಲೆವೆಲ್ 2 ಅಪರಾಧದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಅವರ ಪಂದ್ಯದ ಶುಲ್ಕದ 100% ದಂಡವನ್ನು ವಿಧಿಸಲಾಯಿತು. ನವೀನ್-ಉಲ್-ಹಕ್ ಅವರ ಲೆವೆಲ್ 1 ಅಪರಾಧಕ್ಕಾಗಿ ತಮ್ಮ ಪಂದ್ಯದ ಶುಲ್ಕದ 50% ರಷ್ಟನ್ನು ಕಳೆದುಕೊಂಡರು. […]