ಭತ್ತದ ಮೋಟೆ ಹೊತ್ತಿದ್ದ ಲಾರಿ ಕಾರಿನ ಮೇಲೆ ಪಲ್ಟಿ: ಪ್ರಯಾಣಿಕರು ಪವಾಡ ಸದೃಶ ಪಾರು

ಪರ್ಕಳ: ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ಕೆಳಪರ್ಕಳದಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಪ್ರವಾಸಿ ಕಾರುಗಳ ಮೇಲೆ ಪಲ್ಟಿಯಾಗಿದೆ. ಇದರಲ್ಲಿ ಒಂದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಭತ್ತದ ಮೂಟೆಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಪ್ರಯಾಣಿಕರು ಕೆಲಹೊತ್ತು ಪರದಾಡಿದರು. ಕಾರಿನಲ್ಲಿದ್ದವರು ಪವಾಡಸದೃಶರಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಮಣಿಪಾಲ- ಪರ್ಕಳ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಬೇರೆ ಜಿಲ್ಲೆ ಅಥವಾ ರಾಜ್ಯಗಳಿಂದ ಆಗಮಿಸುವ ವಾಹನ ಚಾಲಕರು ಉಡುಪಿಯಿಂದ ಕಾರ್ಕಳಕ್ಕೆ ತೆರಳುವಾಗ ಗೊಂದಲಕ್ಕೆ […]

ಕಟಪಾಡಿ: ಬೈಕ್ ಗೆ ಲಾರಿ ಢಿಕ್ಕಿ; ಸಹಸವಾರ ಮೃತ್ಯುವಶ

ಕಟಪಾಡಿ: ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಉದ್ಯಾವರ ಬೊಳ್ಜೆಯ ಮೂಲದ ಸುಶಿಕ್ಷಿತ್ (20) ಎಂದು ಗುರುತಿಸಲಾಗಿದೆ. ಸುಶಿಕ್ಷಿತ್ ತನ್ನ ಗೆಳೆಯ ಜಯದೀಪ್ ಜೊತೆಗೆ ಕೆಟರೀಂಗ್ ಕೆಲಸಕ್ಕಾಗಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುಶಿಕ್ಷಿತ್ ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅಫಘಾತದಿಂದ […]