ಭಾರತದಿಂದ ಬಾಂಗ್ಲಾವರೆಗೆ 3,200 ಕಿ.ಮೀ ಉದ್ದದ ‘ಗಂಗಾವಿಲಾಸ’: ವಿಶ್ವದ ಅತಿ ಉದ್ದದ ನೌಕಾ ವಿಹಾರಕ್ಕೆ ಚಾಲನೆ
ನವದೆಹಲಿ: ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ವಿಶ್ವದಲ್ಲೇ ಅತಿ ಉದ್ದದ ನದಿಯ ಮೂಲಕದ ನೌಕಾ ವಿಹಾರ ‘ಗಂಗಾವಿಲಾಸ’ ಯೋಜನೆಗೆ ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಐಷಾರಾಮಿ ಕ್ರೂಸರ್ ಈ ವಾರ ತನ್ನ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಭಾರತದ ಕೆಲವು ಪ್ರಸಿದ್ಧ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ಮೂಲಕ ಸುತ್ತುತ್ತಾ 27 ನದಿಗಳನ್ನು ಒಳಗೊಳ್ಳುತ್ತಾ ಭಾರತದ ಕಾಶಿಯಿಂದ ಬಾಂಗ್ಲಾ ದೇಶದವರೆಗಿನ 3,200 ಕಿ.ಮೀ. ದೂರದ ಪ್ರಯಾಣವನ್ನು 51 ದಿನಗಳಲ್ಲಿ ಸಂಪೂರ್ಣಗೊಳಿಸಲಿದೆ. […]