ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ
ಕುಂದಾಪುರ: ಈ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ದೊರೆತಿದೆ. ಕನ್ನಡದ ಪ್ರಮುಖ ಲೇಖಕರುಗಳಾದ ಡಾ.ಕೆ.ವೈ.ನಾರಾಯಣಸ್ವಾಮಿ, ರೇಣುಕಾ ನಿಡಗುಂದಿ, ಕಮಲಾಕರ ಭಟ್ ಕಡವೆ ಇವರುಗಳು ನಿರ್ಣಾಯಕರಾಗಿ ಸಹಕರಿಸಿರುತ್ತಾರೆ. ಈ ಪ್ರಶಸ್ತಿಯು ಹದಿನೈದು ಸಾವಿರ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ ಹದಿಮೂರರಂದು ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.