ಲಯನ್ಸ್ ಕ್ಲಬ್ ಉಡುಪಿಯ ವಜ್ರಮಹೋತ್ಸವ ಕಾರ್ಯಕ್ರಮ
ಉಡುಪಿ: ಇಂದಿನ ದಿನದಲ್ಲಿ ಸರಕಾರಗಳ, ಸಂಪುಟ ಸಭೆಯ ಪ್ರತಿಯೊಂದು ತೀರ್ಮಾನವೂ ಮತ ಬ್ಯಾಂಕ್ ಆಧಾರಿತವಾಗಿರುವುದು ದುರದೃಷ್ಟಕರ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ಅವರು ಕರಾವಳಿ ಕರ್ನಾಟಕದ ಪ್ರಥಮ ಲಯನ್ಸ್ ಕ್ಲಬ್ ಆದ ಲಯನ್ಸ್ ಕ್ಲಬ್ ಉಡುಪಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳು ಹಿಂದೆಯೂ ಬಂದಿವೆ. ಮುಂದೆಯೂ ಬರುತ್ತವೆ. ಆದರೂ ನಿರಾಶವಾದಿಗಳಾಗುವ ಅಗತ್ಯವಿಲ್ಲ. ಜನರು ಧೃತಿಗೆಡದೆ ಸಮಸ್ಯೆಯನ್ನು ಎದುರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದರು. “ಅನಾರೋಗ್ಯವಾದರೆ […]