ವಿಶ್ವ ಕೆಡೆಟ್ ಜೂಡೋ ಚಾಂಪಿಯನ್‌ಶಿಪ್‌: ಭಾರತದ 15 ವರ್ಷದ ಲಿಂಥೋಯ್ ಚನಂಬಮ್ ಐತಿಹಾಸಿಕ ಗೆಲುವು

ಸರಜೆವೊದಲ್ಲಿ ನಡೆದ ವಿಶ್ವ ಕೆಡೆಟ್ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 15 ರ ಹರೆಯದ ಲಿಂಥೋಯ್ ಚನಂಬಮ್ ಚಿನ್ನ ಗೆದ್ದು ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಜೂಡೋ ಪಂದ್ಯಾವಳಿಯಲ್ಲಿ ಯಾವುದೇ ವಯಸ್ಸಿನ ಗುಂಪಿನಲ್ಲಿ ಪದಕ ಗೆದ್ದ ಮೊದಲ ಭಾರತೀಯರಾಗಿ ಲಿಂಥೋಯ್ ಹೊರಹೊಮ್ಮಿದ್ದಾರೆ. ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ನಡೆದ ಮಹಿಳೆಯರ 57 ಕೆಜಿ ಸ್ಪರ್ಧೆಯಲ್ಲಿ ಬ್ರೆಜಿಲ್‌ನ ಬಿಯಾಂಕಾ ರೀಸ್ ಅವರನ್ನು ಸೋಲಿಸಿದ ಮಣಿಪುರದ ಬಾಲಕಿ ಚಿನ್ನ ಗೆದ್ದು ಬೀಗಿದ್ದಾರೆ.