ಬದುಕಲ್ಲಿ ಅವಕಾಶಗಳು ಸಾವಿರ ಉಂಟು! ಆ ಅವಕಾಶ ಕಳಕೊಂಡು ಆತ್ಮಹತ್ಯೆ ಮಾಡ್ಕೊಬೇಡಿ ಪ್ಲೀಸ್: ಇಂದು ವಿಶ್ವ ಆತ್ಮಹತ್ಯೆ ತಡೆ ದಿನ

ಮನೆಗೆ ಪುಟ್ಟ ಕಂದಮ್ಮ ಬರುವುದು ಎಂದಾಗ ಮನೆಮಂದಿಗೆಲ್ಲಾ ಆಗುವ ಸಂತೋಷ ಹೇಳ ತೀರದು.  “ಜನನ “ತರುವುದು ಖುಷಿ ಅಪರಿಮಿತ. ಆದರೆ ವಾಸ್ತವ “ಸಾವು” ಬೆನ್ನ ಹಿಂದೆಯೇ ಇರುವುದು. ಅದೊಂದಕ್ಕೇನೋ! ಬಹುಶ ನಾವು ಕೊರಗುವುದು. “ನಮ್ಮ ಸಾವನ್ನು ನಾವೇ ತಂದು ಕೊಳ್ಳಲು ಪರಿತಪಿಸುವುದು, ಸಾವೊಂದೇ ಪರಿಹಾರವೆಂಬಂತೆ ನಿರ್ಧಾರ ಕೈಗೊಳ್ಳುವುದು” ಇದು ಹೊಸ ವಿದ್ಯಮಾನವಲ್ಲ. ಜಗತ್ತು ಎಂದೋ ಕಂಡುಕೊಂಡಿದೆ, ಇಂದು ಕಾಣುತ್ತಿದೆ, ನಿತ್ಯವು ಅನುಭವಿಸುತ್ತಿದೆ, ಜೊತೆಗೆ ಪ್ರತಿಕ್ಷಣ ತಡೆಯಲು ಕಾದಾಡುತ್ತಿದೆ .ಆ ವಿದ್ಯಮಾನವೇ “ಆತ್ಮಹತ್ಯೆ” . ಇಂದು ನಾವಿದ್ದೇವೆ” ಸೆಪ್ಟೆಂಬರ್ […]