ಜಿಲ್ಲೆಯ ಬೀಚ್ ಗಳಲ್ಲಿ ಜೀವ ರಕ್ಷಕರ ಹುದ್ದೆಗಾಗಿ ಅರ್ಜಿ ಆಹ್ವಾನ
ಉಡುಪಿ: ಜಿಲ್ಲೆಯ ವಿವಿಧ ಪ್ರಮುಖ ಕಡಲ ತೀರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಬೀಚ್‌ನಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದಲ್ಲಿ ಹಾಗೂ ಪ್ರವಾಸಿಗರ ಜೀವ ರಕ್ಷಣೆಗಾಗಿ ಜೀವರಕ್ಷಕರನ್ನು ನಿಯೋಜಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜೀವರಕ್ಷಕ (ಲೈಫ್ ಗಾರ್ಡ್) ತರಬೇತಿ ಪಡೆದು, ಚಾಲ್ತಿಯಲ್ಲಿರುವ ಪ್ರಮಾಣ ಪತ್ರವನ್ನು ಹೊಂದಿರುವ ಜಿಲ್ಲೆಯ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ಎ ಬ್ಲಾಕ್, ಎರಡನೇ ಮಹಡಿ, ಕೊಠಡಿ ಸಂಖ್ಯೆ: 303, ರಜತಾದ್ರಿ, ಮಣಿಪಾಲ, ಉಡುಪಿ […]