ಅಪರಿಚಿತ ವ್ಯಕ್ತಿಗಳ ಗುಂಡಿಗೆ ಮತ್ತೊಬ್ಬ ಭಯೋತ್ಪಾದಕ ಬಲಿ: ಎಲ್‌ಇಟಿ ಕಮಾಂಡರ್ ಹತ್ಯೆಗೈದ ಅಪರಿಚಿತ ಗನ್ ಮ್ಯಾನ್ ಗಳು

ಕರಾಚಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಅಕ್ರಮ್ ಖಾನ್ ಘಾಜಿಯನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಾಜಿ ಹತ್ಯೆಯ ತನಿಖೆಗಾಗಿ ಪಾಕಿಸ್ತಾನದ ಏಜೆನ್ಸಿಗಳು ಸ್ಥಳೀಯ ವಿರೋಧಿಗಳ ಪಾತ್ರವನ್ನು ಮತ್ತು ಎಲ್ಇಟಿಯೊಳಗಿನ ಜಗಳಗಳನ್ನು ಪರಿಶೀಲಿಸುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘಾಜಿ ಎಲ್‌ಇಟಿಯ ಕೇಂದ್ರ ನೇಮಕಾತಿ ಸೆಲ್‌ನ ಪ್ರಮುಖ ಸದಸ್ಯನಾಗಿದ್ದ ಮತ್ತು ಕಾಶ್ಮೀರ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಜವಾಬ್ದಾರಿಯನ್ನು ಹೊಂದಿದ್ದ ಎನ್ನಲಾಗಿದೆ. ಘಾಜಿಯ ಹತ್ಯೆಯು […]