ಚಂಡಮಾರುತ ಬಿಪರ್‌ಜೋಯ್ ಹಿನ್ನೆಲೆಯಲ್ಲಿ ಕಚ್ ಜಿಲ್ಲೆಯ 30000 ಕ್ಕೂ ಮಿಕ್ಕಿ ಸ್ಥಳೀಯರ ಸ್ಥಳಾಂತರ

ಅಹಮದಾಬಾದ್: ಬಿಪರ್‌ಜೋಯ್ ಚಂಡಮಾರುತವು ನಾಳೆ ಸಂಜೆ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತವು ಪ್ರಸ್ತುತ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದ್ದು ಪೋರಬಂದರ್‌ನಿಂದ ನೈಋತ್ಯಕ್ಕೆ 350 ಕಿಲೋಮೀಟರ್ ದೂರದಲ್ಲಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳವಾರ, ಗುಜರಾತ್‌ನ ಅಧಿಕಾರಿಗಳು ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಕರಾವಳಿ ಪ್ರದೇಶಗಳಿಂದ 37,800 ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಹಲವಾರು ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳು ಕಾರ್ಯಾಚರಣೆಗೆ ಸನ್ನದ್ದವಾಗಿವೆ. ಪರಿಹಾರ […]