ಅ. 20 ರಂದು ಅರ್ಚನಾ ಸಿಗ್ನೇಚರ್ ವಾಣಿಜ್ಯ ವಸತಿ ಸಮುಚ್ಚಯದ ಭೂಮಿ ಪೂಜೆ; ಅ. 30 ರೊಳಗೆ ಬುಕ್ಕಿಂಗ್ ಮಾಡುವವರಿಗೆ ವಿಶೇಷ ಆಫರ್!

ಉಡುಪಿ: ಇಲ್ಲಿನ ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಎಂಜಿಎಂ-ಬುಡ್ನಾರ್ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ಅರ್ಚನಾ ಸಿಗ್ನೇಚರ್ ವಾಣಿಜ್ಯ ವಸತಿ ಸಮುಚ್ಚಯದ ಭೂಮಿ ಪೂಜೆ ಅ.20 ರಂದು ಬೆಳಿಗ್ಗೆ 10 ರಿಂದ 11 ರವರೆಗೆ ನಡೆಯಲಿದೆ. ಯೂನಿಯನ್ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಮುಖ್ಯ ಅತಿಥಿ ಮನೋಜ್ ಸಾಲಿಯಾನ್ ಅವರು ವಸತಿ ಸಮುಚ್ಛಯಕ್ಕೆ ಅಡಿಪಾಯ ಹಾಕಲಿದ್ದಾರೆ. ಅರ್ಚನಾ ಪ್ರಾಜೆಕ್ಟ್ಸ್ ಡಾ. ಅರವಿಂದ್ ನಾಯಕ್ ಅಮ್ಮುಂಜೆ ಮತ್ತು ಅಮಿತ್ ಅರವಿಂದ್ ಅವರಿಂದ 2004 ರಲ್ಲಿ ಪ್ರಾರಂಭವಾಗಿದ್ದು, ISO 9001:2015 ಪ್ರಮಾಣಿತ ಕಂಪನಿಯಾಗಿದೆ. ಯೋಜನೆಯು ಎಲ್ಲಾ […]

ಕುಂಜಿಬೆಟ್ಟು ವಾರ್ಡ್ ರಸ್ತೆ ಕಾಂಕ್ರೀಟ್ ಕಾಮಗಾರಿ: 30 ದಿನ ಸಂಚಾರ ನಿರ್ಬಂಧ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಕುಂಜಿಬೆಟ್ಟು ವಾರ್ಡಿನ ಶಾರದ ಕಲ್ಯಾಣ ಮಂಟಪ ರಸ್ತೆಯಿಂದ ಸೇತುವೆವರೆಗೆ ರಸ್ತೆ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ 30 ದಿನಗಳವರೆಗೆ ಸದ್ರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಅಕ್ಕ-ಪಕ್ಕದ ಬದಲೀ ರಸ್ತೆಯನ್ನು ಬಳಸಿ, ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಡಿ. 26 ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯು ಡಿಸೆಂಬರ್ 26 ರಂದು ಬೆಳಗ್ಗೆ 10.30 ಕ್ಕೆ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಉದ್ಘಾಟಿಸಲಿದ್ದು, […]

ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕೋಲಜಿ: ಡೇ ಕೇರ್ ಸೆಂಟರ್ ಶುಭಾರಂಭ

ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕೋಲಜಿಯು ಉಡುಪಿಯಲ್ಲಿ ಡೇ ಕೇರ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಶುಕ್ರವಾರ ಜುಲೈ 8 ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಬುಸಿನೆಸ್ ಬೇ ಸೆಂಟರ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನಾ ಸಮಾರಂಭವು ನಡೆಯಿತು. ಹೈ-ಟೆಕ್ ಆಸ್ಪತ್ರೆಯ ನಿರ್ದೇಶಕ ಡಾ.ಟಿ.ಎಸ್.ರಾವ್ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುವ ಆನ್ಕೊಲೊಜಿಸ್ಟ್ ಗಳು ಡಾ.ಸುರೇಶ್ ರಾವ್ (ಬುಧವಾರ) ಡಾ.ಸನತ್ ಹೆಗ್ಡೆ(ಸೋಮವಾರ/ಶುಕ್ರವಾರ) ಡಾ.ದಿನೇಶ್ ಶೇಟ್(ಶುಕ್ರವಾರ) ಡಾ.ಹೇಮಂತ್ ಕುಮಾರ್(ಗುರುವಾರ) ಡಾ.ವೆಂಕಟರಾಮನ್ ಕಿಣಿ(ಮಂಗಳವಾರ) ಭೇಟಿ […]