ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ‘ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ’

ಉಡುಪಿ: ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಪ್ರಥಮ ಬಾರಿಗೆ ” ಅಮ್ಮನಿಂದ ಅಮ್ಮನೆಡೆಗೆ ನಮ್ಮ ನಡಿಗೆ ” ಕಾರ್ಯಕ್ರಮವು ನಡೆಯಿತು. ಕನ್ನರ್ಪಾಡಿ ಜಯದುರ್ಗೆಗೆ ನಮಿಸಿ, ಮುಂಜಾನೆ 5.45ಕ್ಕೆ ಪಾದಯಾತ್ರೆ ಆರಂಭಗೊಂಡು ಉದ್ಯಾವರ, ಕಟಪಾಡಿ ಮಾರ್ಗವಾಗಿ ಕಾಲುನಡಿಗೆಯಲ್ಲಿ ವಲಯದ 36 ಉತ್ಸಾಹಿ ಸದಸ್ಯರು ಮತ್ತು ಇತರ ವಲಯದ ಸದಸ್ಯರು ಕುಂಜಾರುಗಿರಿಗೆ ಪಯಣಿಸಿ, 8.15 ರ ಹೊತ್ತಿಗೆ ಕುಂಜಾರುಗಿರಿಯ ಮೆಟ್ಟಿಲನ್ನೇರಿ ಕುಂಜಾರಮ್ಮನಿಗೆ ದರ್ಶನಗೈದರು. ಭಕ್ತರನ್ನು ಅದಮಾರು ಮಠದ ವತಿಯಿಂದ ಸ್ವಾಗತಿಸಲಾಯಿತು. ಸಂಘದ ಅಧ್ಯಕ್ಷ ಎಂ.ಎನ್.ರಾಜೇಂದ್ರ , ಕಾರ್ಯದರ್ಶಿ ಎಂ.ಸುರೇಶ್ ರಾವ್, […]

ಕುಂಜಾರುಗಿರಿ: ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಭಕ್ತರಿಗೆ ಉಚಿತ ರಾಷ್ಟ್ರಧ್ವಜ ವಿತರಣೆ

ಉಡುಪಿ: ಶ್ರೀ ಕ್ಷೇತ್ರ ಕುಂಜಾರುಗಿರಿ ದುರ್ಗಾ ದೇವಸ್ಥಾನದಲ್ಲಿ, ಚಾತುರ್ಮಾಸ ವೃತ ಸಂಕಲ್ಪಿತರಾದ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು, ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಅಂಗವಾಗಿ ಗಿರಿಬಳಗದ ವತಿಯಿಂದ ಉಚಿತವಾಗಿ ರಾಷ್ಟ್ರಧ್ವಜವನ್ನು ಭಕ್ತರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಬಂಧಕರಾದ ರಾಜೇಂದ್ರ ರಾವ್, ಗಿರಿಬಳಗದ ಅಧ್ಯಕ್ಷರಾದ ಪುಂಡರೀಕಾಕ್ಷ ಭಟ್ ಮತ್ತು ಸದಸ್ಯರು ಉಪಸ್ಥಿತರಿದ್ದರು.