ಕುಂದಾಪುರ ಸಾರ್ವತ್ರಿಕ ಮುಷ್ಕರ :೨ನೇ ದಿನ ಬೃಹತ್ ಮೆರವಣಿಗೆ
ಕುಂದಾಪುರ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿಯಾಗಿ ನಡೆದುಕೊಂಡರೆ, ಕಾರ್ಮಿಕ ಕಾನೂನುಗಳನ್ನು ಮುಟ್ಟಲಿಕ್ಕೆ ಬಂದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕುದಾದ ಪಾಠವನ್ನು ಕಲಿಸುತ್ತಾರೆ. ಆ ತಾಕತ್ತು, ಆ ಸಾಮರ್ಥ್ಯ ಕಾರ್ಮಿಕ ವರ್ಗಕ್ಕೆ ಇದೆ ಎಂದು ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಹೇಳಿದ್ದಾರೆ. ರಾಷ್ಟ್ರವ್ಯಾಪಿ ನಡೆಸುತ್ತಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಎರಡನೇ ದಿನವಾದ ಬುಧವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ರ್ಯಾಲಿಯ ಬಳಿಕ […]