ಪಂಚಗಂಗಾ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 5 ಬೋಗಿಗಳ ಜೋಡಣೆ.

ಕುಂದಾಪುರ: ಸುಬ್ರಹ್ಮಣ್ಯ – ಸಕಲೇಶಪುರ ರೈಲ್ವೆ ಹಳಿ ವಿದ್ಯುದ್ದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಾರವಾರ – ಯಶವಂತಪುರ ಹಗಲು ರೈಲು ಸಂಚಾರವನ್ನು ಸ್ಥಗಿತಗೊಳಿಸುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿಯಾಗಿ 5 ಬೋಗಿಗಳನ್ನು ಜೋಡಿಸಲಾಗುತ್ತಿದೆ. ಜೂ.11 ರಿಂದ ಅನ್ವಯವಾಗಲಿದೆ. ಕುಂದಾಪುರ, ಉಡುಪಿ, ಕಾರವಾರ ಭಾಗದ ಜನರಿಗೆ ಅನುಕೂಲವಾಗಿದ್ದ ಹಗಲು ರೈಲು ಸಂಚಾರವನ್ನು ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸುತ್ತಿರುವುದರಿಂದ ಈ ಮಾರ್ಗವಾಗಿ ಬೆಂಗಳೂರಿಗೆ ರಾತ್ರಿ ವೇಳೆ ಹೆಚ್ಚುವರಿ ರೈಲು ಒದಗಿಸುವಂತೆ ನೈಋತ್ಯ ರೈಲ್ವೆಗೆ ಕುಂದಾಪುರದ ಪ್ರಯಾಣಿಕರ ಹಿತರಕ್ಷಣಾ […]