ಅಸಮಧಾನ ಸ್ಪೋಟ: ಅಧ್ಯಕ್ಷರ ವಿರುದ್ದವೇ ತಿರುಗಿಬಿದ್ದ ಆಡಳಿತ ಪಕ್ಷದ ಸದಸ್ಯರು: ತಾ.ಪಂ ಸಾಮಾನ್ಯಸಭೆ ಮುಂದೂಡಿ ಹೊರನಡೆದ ಅಧ್ಯಕ್ಷೆ!

ಕುಂದಾಪುರ: ತಾಲೂಕು ಪಂಚಾಯಿತಿ ಅಧ್ಯಕ್ಷರ ವಿರುದ್ದವೇ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಅಸಮಧಾನ ಸ್ಪೋಟಿಸಿದ್ದಾರೆ. ಜನಸಾಮಾನ್ಯರ ಸಂಕಷ್ಟಗಳು, ಅಭಿವೃದ್ದಿಯ ಕುರಿತಾಗಿ ಚರ್ಚೆ ನಡೆಯಬೇಕಿದ್ದ ಸಾಮಾನ್ಯ ಸಭೆ ಕೇವಲ ಗಲಾಟೆ ಗದ್ದಲಗಳಿಗಷ್ಟೇ ಸೀಮಿತವಾಯಿತು. ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಆಡಳಿತ ಹಾಗೂ ವಿಪಕ್ಷ ಸದಸ್ಯರ ಪ್ರಶ್ನೆಗಳ ಸರಮಾಲೆಗೆ ಉತ್ತರಿಸಲಾಗದೆ ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ನವೆಂಬರ್ ೨೬ಕ್ಕೆ ಮುಂದಿನ ದಿನಾಂಕ ಪ್ರಕಟಿಸಿ ಸಭೆಯಿಂದ ಹೊರನಡೆದ ಘಟನೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಸಭಾಂಗಣದಲ್ಲಿ […]