ರೋಡಿಗಿಳಿಯುವ ಸವಾರರಿಗೆ ಹತ್ತು ಬಸ್ಕಿ: ಇದು ಕುಂದಾಪುರ ಪೊಲೀಸರ ಹೊಸ ಅಸ್ತ್ರ.
-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಕುಂದಾಪುರ: ರಾಜ್ಯದೆಲ್ಲಡೆ ಕೊರೋರಾ ಮಹಾಮಾರಿ ವ್ಯಾಪಕವಾಗುತ್ತಿರುವ ಬೆನ್ನಲ್ಲೇ ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊರಡಿಸಿರುವ ಕಫ್ರ್ಯೂ ಆದೇಶಕ್ಕೆ ನಗರದ ಸಾರ್ವಜನಿಕರು ಕ್ಯಾರೇ ಅನ್ನುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಬಾರೆದೆಂಬ ಉದ್ದೇಶದಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಕಫ್ರ್ಯೂ ಸಡಿಲಗೊಳಿಸಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದನ್ನು ದುರುಪಯೋಗಪಡಿಸಿಕೊಂಡು ಅನಗತ್ಯವಾಗಿ ಕೆಲ ರಸ್ತೆ ಮೇಲೆ ತಿರುಗಾಡುತ್ತಿರುವ ವಾಹನ ಸವಾರರಿಗೆ ಬುಧವಾರದಿಂದಲೇ ಪೊಲೀಸರು ಲಾಠಿ ಚಾರ್ಜ್ ಮಾಡಲಾರಂಭಿಸಿದ್ದಾರೆ. ಬುಧವಾರ ಬೆಳಿಗ್ಗೆ ಲಾಠಿ ಚಾರ್ಜ್ ಮಾಡಿದ್ದರಿಂದ ಕೆಲಹೊತ್ತು ಕುಂದಾಪುರ ನಗರದ […]