ಕುಂದಾಪುರ:ನನ್ನ ಸಂಗೀತ ಸಂಯೋಜನೆ ನಿರ್ದೇಶನಕ್ಕೆ ಬಳ್ಕೂರೇ ಮೂಲ- ಪ್ರಸಿದ್ಧ ಸಂಗೀತ ನಿರ್ದೇಶಕ ರವಿ ಬಸ್ರೂರು.

ಕುಂದಾಪುರ:ಮಕ್ಕಳು ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯವಿದೆ. ಬಳ್ಕೂರಿನ ಜನ ಒಳ್ಳೆಯ ಮನಸ್ಸಿನವರು ಒಳ್ಳೆಯ ಕಾರ್ಯಗಳಿಗೆ ಹೆಗಲು ಕೊಡುತ್ತಾರೆ ದೇವತಾ ಕಾರ್ಯಗಳು ಮನಸ್ಸುಗಳನ್ನು ಒಂದು ಮಾಡುತ್ತವೆ. ನನ್ನ ಮೊದಲ ನಿರ್ದೇಶನದ ಸಂಗೀತ ಸಂಯೋಜನೆಯಾಗಿದ್ದು ಬಳ್ಕೂರಿನ ಫ್ರೆಂಡ್ಸ್ ಯುವಕ ಮಂಡಲ ತಂಡದವರು ಅಭಿನಯಿಸಿದ ನಾಟಕ ಪ್ರದರ್ಶನಕ್ಕೆ ಸಂಗೀತ ಸಂಯೋಜನೆ ಮಾಡಿದ್ದೇನೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ಬಳ್ಕೂರಿನಿಂದಲೇ ನನ್ನ ಸಂಗೀತ ಸಂಯೋಜನೆ ಆರಂಭಗೊಂಡು ಹಲವು ಸಿನಿಮಾಗಳಲ್ಲಿ ಇಂದು ನಿರ್ದೇಶನ ಮಾಡುತ್ತಿದ್ದೇನೆ. ಬಹಳಷ್ಟು ಮಂದಿ ಕಲಾವಿದರು ಈ ಊರಿನಲ್ಲಿದ್ದಾರೆ. […]