ಕುಂದಾಪುರ: ಹಾಡಹಗಲೇ ಮಾರಕಾಯುಧಗಳಿಂದ ಕೊಚ್ಚಿ ಬರ್ಬರ ಹತ್ಯೆ

ಕುಂದಾಪುರ: ಮಟಮಟ ಮಧ್ಯಾಹ್ನ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನು ಕೊಲೆಗೈದ ದಾರುಣ ಘಟನೆ ಇಲ್ಲಿನ ಹಟ್ಟಿಯಂಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲ್ಕಂಬ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಕಂಡ್ಲೂರು ಸಮೀಪದ ವಾಲ್ತೂರು ಗ್ರಾಮದ ಜೋರ್ಮಕ್ಕಿಯ ನರಸಿಂಹ ಶೆಟ್ಟಿಯವರ ಪುತ್ರ ಬಾಬು ಶೆಟ್ಟಿ (೫೫) ಕೊಲೆಯಾದ ದುರ್ದೈವಿ. ಟೆಂಪೋ ಮಾಲಕರಾಗಿರುವ ಬಾಬು ಶೆಟ್ಟಿ ಕೃಷಿಚಟುವಟಿಕೆಗಳಿಗೆ ಗೊಬ್ಬರ ಸಾಗಾಟ ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಮನೆಯ ತೋಟಗಳಿಗೆ ನೀರು ಹಾಯಿಸಿ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ […]