ಹೋಟೆಲ್ ಉದ್ಯಮಿ ಸುರೇಶ್ ಪೂಜಾರಿ ಪಡುಕೋಣೆ ನಿಧನ

ಕುಂದಾಪುರ: ಮುಂಬಯಿಯಲ್ಲಿ ಸುಖ ಸಾಗರ್ ಗ್ರೂಪ್ ಆಫ್ ಹೊಟೇಲಿನ ಸಂಸ್ಥಾಪಕ ಉದ್ಯಮಿ, ಕೊಡುಗೈ ದಾನಿ ಪಡುಕೋಣೆ ಸುರೇಶ್ ಪೂಜಾರಿ (87) ಬುಧವಾರ (ಜೂ.4) ಸಂಜೆ ಮುಂಬಯಿಯಲ್ಲಿ ವಯೋ ಸಹಜವಾಗಿ ನಿಧನರಾಗಿದ್ದಾರೆ. ಎಳೆಯ ವಯಸ್ಸಿನಲ್ಲೇ ಹುಟ್ಟೂರನ್ನು ತೊರೆದು ಕುಟುಂಬದ ಪಾಲನೆಗೆ ದೂರದ ಮಾಯಾ ನಗರಿ ಮುಂಬಯಿಗೆ ತೆರಳಿ ತಮ್ಮ ಸ್ವ ಸಾಮರ್ಥ್ಯದಿಂದ ಸುಖ ಸಾಗರ ಗ್ರೂಪ್ ಆಪ್ ಹೋಟೆಲಿನ ಸಾಮ್ರಾಜ್ಯವನ್ನು ಕಟ್ಟಿ ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಸಮರ್ಪಿಸಿದ ಕೊಡುಗೈ ದಾನಿ ಸುರೇಶ್ ಎಸ್ […]