ಮೀನು ಲಾರಿ ಚಾಲಕರಿಗೆ ಸಾರ್ವಜನಿಕರಿಂದ ಕಿರುಕುಳ: ಲಾರಿ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್

ಕುಂದಾಪುರ: ಮೀನು ಸಾಗಾಟದ ಲಾರಿ ಚಾಲಕರು ಸಾರ್ವಜನಿಕರಿಂದ ದಿನನಿತ್ಯ ಹಲ್ಲೆಗೊಳಗಾಗುತ್ತಿದ್ದಾರೆ. ಸಾರ್ವಜನಿಕರಿಗೆ ಬೇಕಂತಲೇ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಕಾರವಾರದಿಂದ ಮಂಗಳೂರಿನ ತನಕ ಅಲ್ಲಲ್ಲಿ ನಮಗೆ ಮೀನಿನ ಮಲೀನ ನೀರನ್ನು ಬಿಡಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ ಎಂದು ಲಾರಿ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಹೇಳಿದ್ದಾರೆ. ಬುಧವಾರ ಸಂಜೆ ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀನುಗಾರಿಕೆಯಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವಿದೆ. ಲಾರಿಯಿಂದ ಮೀನಿನ ನೀರು ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರು […]