ಕುಂದಾಪುರ:ಕಾಡಲ್ಲಿ ಸಿಕ್ಕಿದ್ದ ಚಿನ್ನಾಭರಣ ಸ್ವಂತಕ್ಕೆ ಬಳಕೆ ಪ್ರಕರಣ: ಸನ್ನಡತೆಗಾಗಿ ಆರೋಪಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿದ ಕೋರ್ಟ್

ಕುಂದಾಪುರ: ಸರಕಾರಿ ಹಾಡಿಯಲ್ಲಿ ಮಣ್ಣಿನ ಮಡಿಕೆಯೊಂದರಲ್ಲಿ ಸಿಕ್ಕ ಹಳೆಯ ಕಾಲದ ಚಿನ್ನಾಭರಣಗಳನ್ನು ತನ್ನ ಸ್ವಂತಕ್ಕೆ ಬಳಸಿದ ಸಾಧು ಪೂಜಾರ್ತಿ(45) ಎಂಬವರ ವಿರುದ್ಧದ ಆರೋಪ ಸಾಬೀತಾಗಿದ್ದು, ಆಕೆಯನ್ನು ದೋಷಿ ಎಂಬುದಾಗಿ ಕುಂದಾಪುರದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಕಳೆದ 13 ವರ್ಷಗಳಿಂದ ಈ ಪ್ರಕರಣದಲ್ಲಿ ಆರೋಪಿತೆ ತೋರಿದ ಸನ್ನಡತೆ ಆಧಾರದಲ್ಲಿ ಅವರಿಗೆ ನ್ಯಾಯಾಧೀಶರು ಕಾರಾಗೃಹ ವಾಸದ ಶಿಕ್ಷೆಯಿಂದ ವಿನಾಯಿತಿ ನೀಡಿದ್ದಾರೆ. ಅಮಾಸೆಬೈಲು ಠಾಣಾ ವ್ಯಾಪ್ತಿಯ ಮಚ್ಚಟ್ಟು ಎಂಬಲ್ಲಿನ ಸರಕಾರಿ ಹಾಡಿಯಲ್ಲಿ ದರಲೆ ಗುಡಿಸುವಾಗ 2012ರ ಡಿ.15 […]