ಗಂಗೊಳ್ಳಿ: ಮಂಗಳೂರು ಪೊಲೀಸ್ ಗೋಲಿಬಾರ್ ಘಟನೆ ಖಂಡಿಸಿ ಮುಸ್ಲಿಂ ವರ್ತಕರಿಂದ ಬಂದ್
ಕುಂದಾಪುರ: ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ಘಟನೆ ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಗಂಗೊಳ್ಳಿಯಲ್ಲಿ ಮುಸ್ಲಿಂ ವರ್ತಕರು ಬಂದ್ ಆಚರಿಸಿದರು. ತಮ್ಮ ದೈನಂದಿನ ವ್ಯವಹಾರವನ್ನು ಶುಕ್ರವಾರ ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿದ ಮುಸ್ಲಿಂ ವರ್ತಕರು, ಶಾಂತಿಯುತವಾಗಿ ಬಂದ್ ಆಚರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮುಸ್ಲಿಮರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದರೆ, ಮುಸ್ಲಿಮರ ಆಟೋ ರಿಕ್ಷಾ, ಕಾರು ಮತ್ತಿತರ ವಾಹನವನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಮುಸ್ಲಿಂ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗೆ ಅವಕಾಶ […]