ಕುಂದಾಪುರ: ನಾಡದೋಣಿ ಮೀನುಗಾರಿಕೆಗೆ ಮತ್ತೆ ಮರುಜೀವ, ಮೀನುಗಾರರ ಮೊಗದಲ್ಲಿ ಸಂತಸದ ಭಾವ

ಕುಂದಾಪುರ: ಲಾಕ್‌ಡೌನ್‌ನಿಂದಾಗಿ ಕಳೆದ ಇಪ್ಪತ್ತು ದಿನಗಳಿಗೂ ಅಧಿಕ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದ ನಾಡದೋಣಿ ಮೀನುಗಾರಿಕೆ ಮತ್ತೆ ಮರುಜೀವ ಪಡೆದುಕೊಂಡಿದೆ. ಸರ್ಕಾರದ ಸೂಚನೆ ಮೇರೆಗೆ ಭಾನುವಾರದಿಂದ ನಾಡದೋಣಿ ಮೀನುಗಾರರು ತಮ್ಮ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಪ್ರಾರಂಭಿಸಿದ್ದಾರೆ. ಕುಂದಾಪುರ, ಬಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಮಡಿ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಮಡಿಕಲ್, ಅಳ್ವೆಗದ್ದೆ ಮೊದಲಾದೆಡೆಯ ಸಾವಿರಾರು ನಾಡದೋಣಿಗಳು ಕಡಲಿಗಿಳಿದು ಮೀನುಗಾರಿಕೆಯನ್ನು ಆರಂಭಿಸಿವೆ. ಹಲವು ದಿನಗಳಿಂದ ತಾಜಾ ಮೀನುಗಳು ಸಿಗದೆ ಹತಾಶೆಯಲ್ಲಿದ್ದ ಮತ್ಸ್ಯಪ್ರಿಯರಲ್ಲಿ ಇದೀಗ ಸಂತಸ ಮನೆಮಾಡಿದೆ. ಸರ್ಕಾರದ ಸೂಚನೆಯಂತೆಯೇ […]