ಮಾಸ್ಕ್ ಧರಿಸದವರಿಗೆ ಹೊಡೆಯಬೇಡಿ: ಎಸ್ಪಿಯವರಿಗೆ ಜಿಲ್ಲಾಧಿಕಾರಿ ಸೂಚನೆ
ಕುಂದಾಪುರ: ಎಲ್ಲಾ ಕಡೆಯೂ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನರಿರುವ ಕಡೆ ಮಾಸ್ಕ್ ಅಗತ್ಯ ಇದೆ. ನಮ್ಮಲ್ಲಿ ಮಾಸ್ಕ್ ಅಭಾವವಿದೆ. ಮಾಸ್ಕ್ ಧರಿಸದವರಿಗೆ ಹೊಡೆಯಬೇಡಿ ಎಂದು ಈಗಾಗಲೇ ಎಸ್ಪಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಸಾರ್ವಜನಿಕರು ಈ ಬಗ್ಗೆ ತಲೆ ಕೆಡಿಸಿಕೂಳ್ಳುವುದು ಬೇಡ. ಸ್ಯಾನಿಟೈಸರ್ ಪೂರೈಕೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಲಾಕ್‍ಡೌನ್ ಹಿನ್ನೆಲೆ ಶುಕ್ರವಾರ ಕುಂದಾಪುರಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕುಂದಾಪುರದಲ್ಲಿ […]