ಕಫ್ರ್ಯೂ ವಿಧಿಸಿದ ಬಳಿಕ ಕುಂದಾಪುರದಲ್ಲಿ ದಾಖಲಾದ ಮೊದಲ ಪ್ರಕರಣ: ಪೊಲೀಸರೊಂದಿಗೆ ಉಡಾಫೆ ಮಾತನಾಡಿದ ಯುವಕ ಅಂದರ್
ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಸರ್ಕಾರ ವಿಧಿಸಿರುವ ಕಫ್ರ್ಯೂ ಮೂರನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೆ ಪೊಲೀಸರ ಮಾತಿಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಯುವಕನೋರ್ವನ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇಲ್ಲಿನ ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ ಶೇರುಗಾರ್(23) ಇದೀಗ ಪೊಲೀಸರ ಅತಿಥಿಯಾಗಿದ್ದು, ಕುಂದಾಪುರದಲ್ಲಿ ಕಫ್ರ್ಯೂ ನಿಯಮ ಉಲ್ಲಂಘಿಸಿದ ಪ್ರಥಮ ಪ್ರಕರಣವಾಗಿ ದಾಖಲಾಗಿದೆ. ಗುರುವಾರ ಬೆಳಿಗ್ಗೆ ಎಸಿ ಸಮ್ಮುಖದಲ್ಲೇ ಕುಂದಾಪುರ ಶಾಸ್ತ್ರೀವೃತ್ತದ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆಯಲ್ಲಿ ಬೈಕ್ನಲ್ಲಿ ಬಂದ ಯುವಕನೋರ್ವ ಪೊಲೀಸರ ಮಾತಿಗೆ ವಾಗ್ವಾದಕ್ಕಿಳಿದಿದ್ದಾನೆ. […]