ಆನಗಳ್ಳಿ ಶ್ರೀ ದತ್ತಾಶ್ರಮದಲ್ಲಿ ಗಿಡ ವಿತರಣೆ, ಸ್ವಚ್ಚತಾ ಕಾರ್ಯಕ್ರಮ

ಕುಂದಾಪುರ: ವಾತಾವರಣ ಸರಿಯಿಲ್ಲ ಎಂದು ಆ ಬಗ್ಗೆ ಪ್ರತಿಭಟನೆ, ಪ್ರತಿಪಾದನೆ ಮಾಡುವ ಮೊದಲು ಜನಕ್ಕೊಬ್ಬರು ಗಿಡ ನೆಡುವ ಕಾರ್ಯವಾಗಬೇಕು. ಮೊದಲು ಪರಿಸರ ಕಾಳಜಿಯನ್ನು ನಾವುಗಳು ಅರಿಯಬೇಕು. ಮನೆಯಲ್ಲಿನ ಶುಭ ಕಾರ್ಯ ಸಂದರ್ಭ ಗಿಡ ವಿತರಣೆ, ಅಶಕ್ತರಿಗೆ ಸಹಕಾರ ಮಾಡುವ ಕೆಲಸವಾಗಬೇಕು,  ಎಂದು ಶೃಂಗೇರಿ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿಯವರು ಹೇಳಿದರು. ಕುಂದಾಪುರದ ಆನಗಳ್ಳಿಯಲ್ಲಿರುವ ಶ್ರೀ ದತ್ತಾಶ್ರಮದಲ್ಲಿ ಶನಿವಾರ ಸಂಜೆ ಸಾರ್ವಜನಿಕರು ಮತ್ತು ಭಕ್ತರಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು. ಪ್ರಕೃತಿ ಪೂಜೆಯೇ ನಿಜವಾದ ದೇವರ ಆರಾಧನೆ. […]