ಕುಂದಾಪುರ: ಕಲಾನರ್ತನ ಡಾನ್ಸ್ ಕ್ರೀವ್, ಕಲಾನರ್ತನ ಸಂಭ್ರಮ, ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ಕುಂದಾಪುರ: ಕಲಾನರ್ತನ ಡಾನ್ಸ್ ಕ್ರೀವ್ ರಿ.ಜನ್ನಾಡಿ ಇದರ ಕಲಾನರ್ತನ ಸಂಭ್ರಮ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯು ಜನ್ನಾಡಿಯಲ್ಲಿ ಇತ್ತೀಚಿಗೆ ವಿಜೃಂಭಣೆಯಿಂದ ಸಂಪನ್ನವಾಯಿತು. ಕಲಾನರ್ತನ ಸಂಭ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಬ್ರಹ್ಮಾವರದ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ.ಇಬ್ರಾಹಿಂಪುರ ಅವರು ದೀಪ ಪ್ರಜ್ವಲಿಸಿ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರು ಮಾತನಾಡುತ್ತಾ, ಸಂಸ್ಥೆಗಳು ಹುಟ್ಟುವುದು ಸುಲಭ, ಬೆಳೆಯುವುದು ಕಷ್ಟ.ಆದರೆ, ಕುಗ್ರಾಮದ ಈ ಸಂಸ್ಥೆ ಬೆಳೆದ ಪರಿ ಅನನ್ಯ […]