ಕುಂದಾಪುರ ಆನಗಳ್ಳಿಯ ದತ್ತಾಶ್ರಮದಲ್ಲಿ ಪ್ರತಿಷ್ಠಾ ವರ್ಧಂತಿ: ಶ್ರೀ ನರ್ಮದಾ ಲಿಂಗಾ ಪ್ರತಿಷ್ಠಾ ಮಹೋತ್ಸವ

ಕುಂದಾಪುರ: ಕುಂದಾಪುರದ ತಾಲೂಕಿನ ಆನಗಳ್ಳಿಯ ಹೆಬ್ಬಾರಬೆಟ್ಟುವಿನ ಶ್ರೀ ದತ್ತಾಶ್ರಮ, ಶ್ರೀ ಆದಿ ಶಕ್ತಿ ಮಠದ ಪ್ರತಿಷ್ಠಾ ವರ್ಧಂತಿ ಹಾಗೂ ಶ್ರೀ ನರ್ಮಂದಾ ಲಿಂಗ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಬುಧವಾರದಂದು ಋಷಿಮುನಿಗಳು ನಡೆದಾಡಿದ ಪುಣ್ಯಭೂಮಿಯಾದ ಹೆಬ್ಬಾರಬೆಟ್ಟುವಿನಲ್ಲಿ ನಡೆಯಿತು. ಶ್ರಂಗೇರಿ ಗೌರಿಗದ್ದೆಯ ಶ್ರೀ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಮತ್ತು ನಾಗಸಾಧುಗಳ ಪಂಥದ ರಾಷ್ಟ್ರೀಯಾ ಜೂನಾ ನವದೆಹಲಿ ಅಖಾಡದ ಉಪಾಧ್ಯಕ್ಷ ಅಗಸ್ತ್ಯಗಿರಿ ಮಹಾರಾಜ್ ಅವರಿಂದ ಬೆಳಿಗ್ಗೆನಿಂದಲೇ ನರ್ಮದಾ ಲಿಂಗದ ಪ್ರತಿಷ್ಠಾಪನೆ, ಅಭಿಷೇಕ, ದತ್ತಾಶ್ರಮ ವರ್ದಂತಿ ನಡೆಯಿತು. ನರ್ಮಾದ ಲಿಂಗಕ್ಕೆ […]