ಕುಂದಾಪುರ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತ್ಯು
ಕುಂದಾಪುರ: ಮಂದಾರ್ತಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಕಲಾಸೇವೆ ನೀಡುತ್ತಿದ್ದ ಅಮಾಸೆಬೈಲಿನ ಕೆಲಗ್ರಾಮದ ನಿವಾಸಿ ಸುದೀಪ ಶೆಟ್ಟಿ (28) ಆಕಸ್ಮಿಕವಾಗಿ ಕೆರೆಗೆ ಬಿದ್ದು ಸೋಮವಾರ ನಿಧನ ಹೊಂದಿದ್ದಾರೆ. ಮೇಗರವಳ್ಳಿ, ಸಿಗಂಧೂರು ಹಾಗೂ ಮಂದಾರ್ತಿ ಮೇಳಗಳಲ್ಲಿ ಒಂದು ದಶಕದಿಂದ ವೇಷಧಾರಿಯಾಗಿದ್ದರು. ಅವಿವಾಹಿತರಾಗಿರುವ ಇವರು ತಂದೆ, ತಾಯಿ ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಸುದೀಪ ಶೆಟ್ಟಿ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.