ಕುಂದಾಪುರ: ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನಿಂದ ಐದನೇ ಮನೆ ಹಸ್ತಾಂತರ

ಕುಂದಾಪುರ: ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ , ಉಪ್ಪುಂದ ಇದರ ವತಿಯಿಂದ ಕಾಳವರದ ನರಿ ಕೋಡ್ಲು ನಿವಾಸಿ ದಿ. ಸತೀಶ್ ಪೂಜಾರಿ ಅವರ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಲಾಯಿತು. ದಿ. ಸತೀಶ್ ಪೂಜಾರಿ ನೂತನ ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಮನೆ ಪೂರ್ಣವಾಗುವ ಮೊದಲೇ ಅವರು ಅಕಾಲಿಕ ಮರಣ ಹೊಂದಿದರು. ಇದರಿಂದ ಮನೆಯವರು ಮನೆ ನಿರ್ಮಾಣ ಮಾಡಲು ಸಾಧ್ಯವಾಗದೆ ತೀವ್ರ ಕಷ್ಟಕ್ಕೆ ಸಿಲುಕಿದರು. ಈ ವಿಷಯ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.)ನ […]