ಕುಂದಾಪುರ: ಕಾರಿನೊಂದಿಗೆ ಚಾಲಕ ನಾಪತ್ತೆ
ಕುಂದಾಪುರ: ಇಲ್ಲಿನ ಕುಂಭಾಶಿ ಗ್ರಾಮದ ವಕ್ವಾಡಿ ರಸ್ತೆ ನಿವಾಸಿ ಅರುಣ್ ಕಲ್ಗುಜ್ಜಿಕರ್ ಅವರ ಕಾರು ಚಾಲಕ ಭರತ್ ಡಿಸೆಂಬರ್ 22ರಿಂದ ಕಾರಿನೊಂದಿಗೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಅರುಣ್ ಅವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭರತ್ ಡಿ.22 ರಂದು ಯಾರಿಗೂ ಮಾಹಿತಿ ನೀಡದೆ ಕುಂಬಾಶಿಯ ತಮ್ಮ ಮನೆಯಿಂದ ಕಾರಿನೊಂದಿಗೆ ತೆರಳಿದ್ದು, ಈವರೆಗೂ ಮನೆಗೆ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.