ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಕಾಲೇಜು ಕೈಗಾರಿಕಾ ಭೇಟಿ; ಉತ್ಪನ್ನಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆ

ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕೈಗಾರಿಕಾ ಭೇಟಿಯ ಭಾಗವಾಗಿ ಕೋಟೇಶ್ವರದ ಸನ್‍ರೈಸ್ ಪೈಪ್ ಇಂಡಸ್ಟ್ರಿ ಮತ್ತು ರಾಜಾರಾಮ್ ಪೊಲಿಮರ್ಸ್ ಇಂಡಸ್ಟ್ರಿ ಕೋಟೇಶ್ವರ ಇಲ್ಲಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸನ್‍ರೈಸ್ ಕೈಗಾರಿಕೆಯ ವ್ಯವಸ್ಥಾಪಕರಾದ ಕುಮಾರ್ ಹಾಗೂ ರಾಜರಾಮ್ ಪೊಲಿಮರ್ಸ್ ಇಂಡಸ್ಟ್ರಿಯ ಪಾಲುದಾರರಾದ ವಿಘ್ನೇಶ್ ಕಾಮತ್‍ ಉತ್ಪನ್ನಗಳ ತಯಾರಿಕೆ ಮತ್ತು ಪ್ರಾತ್ಯಕ್ಷಿಕೆಯ ಕುರಿತು ಉಪನ್ಯಾಸ ನೀಡಿದರು. ಜೊತೆಗೆ ಯಂತ್ರಗಳ ಕಾರ್ಯವೈಖರಿಯನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ಅವಕಾಶ ಮತ್ತು ಮಾರ್ಗದರ್ಶನ […]