ಕುಂದಾಪುರ: ಹೊಳೆಯಲ್ಲಿ ಮುಳುಗಿ ಕಟ್ ಬೆಲ್ತೂರು ನಿವಾಸಿ ಮೃತ್ಯು
ಕುಂದಾಪುರ: ಕಟ್ ಬೆಲ್ತೂರು ಗ್ರಾಮದ ನಿವಾಸಿ ರಾಮ ಪೂಜಾರಿ (62) ಎಂಬವರ ಮೃತದೇಹವು ರಾಜಾಡಿ ಹೊಳೆಯಲ್ಲಿ ಮಾ. 5ರಂದು ಪತ್ತೆಯಾಗಿದೆ. ಇವರು 15 ವರ್ಷದಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಇದೇ ಖಿನ್ನತೆಯಲ್ಲಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.