ಕುಂದಾಪುರ: ಕಾರು- ಬೈಕ್ ಮಧ್ಯೆ ಭೀಕರ ಅಪಘಾತ; ಇಬ್ಬರು ಸವಾರರು ಗಂಭೀರ

ಕುಂದಾಪುರ: ರಸ್ತೆ ಕ್ರಾಸ್ ಮಾಡುತ್ತಿದ್ದ ಬೈಕ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ಸಮೀಪದ ಸಂಗಮ್ ಸರ್ಕಲ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರದವರು ಎಂದು ಗುರುತಿಸಲಾಗಿದೆ. ಎರಡು ಬೈಕ್ ಗಳಲ್ಲಿ ನಾಲ್ಕು ಮಂದಿ ಯುವಕರು ಹೊಸನಗರದಿಂದ ಕುಂದಾಪುರಕ್ಕೆ ಬಂದಿದ್ದರು. ಹೊಸಗನಗರದಿಂದ ಸಿಗಂಧೂರು ಕ್ಷೇತ್ರಕ್ಕೆ ತೆರಳಿ, ಅಲ್ಲಿ ದೇವರ ದರ್ಶನ ಪಡೆದು ಕೋಡಿ ಬೀಚ್ ಗೆ ಹೋಗಲು ಕುಂದಾಪುರಕ್ಕೆ […]