ಕುಂಭಾಶಿ: ಕೆರೆ ಸ್ವಚ್ಛತಾ ಹಾಗೂ ಮರು ನಿರ್ಮಾಣಕ್ಕೆ ರೋಹಿತ್ ಭಟ್ ಅವರಿಂದ ಚಾಲನೆ

ಕುಂದಾಪುರ: ಉಡುಪಿಯ ವೆಂಟನಾ ಫೌಂಡೇಶನ್ ನೇತೃತ್ವದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ರಸ್ತೆಯ ಶ್ರೀ ವಿಷ್ಣು ಮೂರ್ತಿ ದೇವಾಸ್ಥಾನ ಸಮೀಪ ಕೊಯ್ಯಾರಿ ಕೆರೆಯನ್ನು ಸ್ಚಚ್ಚಗೊಳಿಸುವ ಕಾರ್ಯಕ್ಕೆ ಮೇ 8ರಂದು ಚಾಲನೆ ನೀಡಲಾಯಿತು. ಮುಂದಿನ ಹತ್ತು ದಿನಗಳ ಕಾಲ ನಡೆಯುವ ಸ್ವಚ್ಚತಾ ಕಾರ್ಯದ ಸಂಪೂರ್ಣ ವೆಚ್ಚವನ್ನು ಸೇವಾ ರೂಪದಲ್ಲಿ ಫೌಂಡೇಶನ್ ಮೂಲಕ ನಡೆಸಲಾಗುವುದು. ಮೊದಲು ನೀರನ್ನು ಬರಿದಾಗಿಸಿ, ಹೂಳನ್ನು ಎತ್ತಿ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲಿನ ಗದ್ದೆಗಳಿಗೆ ನೀರು ಸಿಗುವಂತೆ ಮಾಡಲಾಗುವುದು. ಸ್ಥಳೀಯ ರೈತರಿಗೆ ಬೇಸಾಯದ ಜೊತೆಯಲ್ಲಿ ತರಕಾರಿ, […]