ಮಿಜೋರಾಂನಲ್ಲಿ ಸಶಸ್ತ್ರ ಕುಕಿ ಒಳನುಸುಳುವಿಕೆ ಸಮಸ್ಯೆ: ಜಂಟಿ ಕಾರ್ಯಾಚರಣೆಗೆ ಮುಂದಾದ ಭಾರತ ಮತ್ತು ಬಾಂಗ್ಲಾದೇಶ

ನವದೆಹಲಿ: ಈಶಾನ್ಯ ಭಾರತದ ಪ್ರಕ್ಷುಬ್ಧ ಮಿಜೋರಾಂ ರಾಜ್ಯಕ್ಕೆ ಸಶಸ್ತ್ರ ಬಂಡುಕೋರರು ನಿರಾಶ್ರಿತರಾಗಿ ನುಸುಳುತ್ತಿರುವ ಆತಂಕಕಾರಿ ಸುದ್ದಿಯಿಂದ ಬಾಂಗ್ಲಾದೇಶ ಮತ್ತು ಭಾರತ ಆತಂಕಗೊಂಡಿವೆ. ದೆಹಲಿ ಮತ್ತು ಢಾಕಾ ಎರಡೂ ಪ್ರದೇಶದಲ್ಲಿನ ಹೊಸ ಭದ್ರತಾ ಸವಾಲುಗಳನ್ನು ಎದುರಿಸಲು ಗುಪ್ತಚರ ವರದಿಗಳನ್ನು ಹಂಚಿಕೊಳ್ಳುತ್ತಿದ್ದು, ಸ್ಥಳೀಯ ಪತ್ರಿಕೆ ಮತ್ತು ಸ್ಥಳೀಯ ಮೂಲಗಳಿಂದ ಮಾಹಿತಿ ಕ್ರೋಢೀಕರಿಸುತ್ತಿದೆ. ಕುಕಿ-ಚಿನ್ ರಾಷ್ಟ್ರೀಯ ಸೇನೆಯು (KNA) ಬಾಂಗ್ಲಾದೇಶ ಸೇನೆ ಮತ್ತು ಗಣ್ಯ ಅಪರಾಧ-ವಿರೋಧಿ ಪಡೆ ರಾಪಿಡ್ ಆಕ್ಷನ್ ಬೆಟಾಲಿಯನ್ (RAB) ನೊಂದಿಗೆ ಹಲವಾರು ಕದನಗಳಲ್ಲಿ ತೊಡಗಿದೆ. ದಾಳಿಯ ಸಮಯದಲ್ಲಿ, […]