ಕುಬ್ಜಾ ನದಿಯಲ್ಲಿ ಮಕ್ಕಳನ್ನು ಸಾಯಿಸಿದ ಪ್ರಕರಣ:ತಾಯಿಗೆ ನಿರೀಕ್ಷಣಾ ಜಾಮೀನು

ಕುಂದಾಪುರ : ತಾಲ್ಲೂಕಿನ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜು.11 ರಂದು ಬೆಳಿಗ್ಗೆ 4.30 ರ ವೇಳೆಯಲ್ಲಿ ಮನೆಯ ಸಮೀಪದಲ್ಲಿ ಇರುವ ಕುಬ್ಜಾ ನದಿಯಲ್ಲಿ 1 ವರ್ಷ 3 ತಿಂಗಳ ಹೆಣ್ಣು ಮಗು ಸಾನ್ವಿಕಾಳನ್ನು ಕೊಂದು, 5 ವರ್ಷದ ಪ್ರಾಯದ ಪುತ್ರ ಸಾತ್ವಿಕನನ್ನು ಕೊಲ್ಲಲು ಯತ್ನಿಸಿದ ಆರೋಪಗಳನ್ನು ಎದುರಿಸುತ್ತಿದ್ದ ಮಕ್ಕಳಿಬ್ಬರ ತಾಯಿ ರೇಖಾ (32) ಎಂಬಾಕೆಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಮನೆಯಲ್ಲಿ ಮಲಗಿದ್ದ ವೇಳೆ ನಸುಕಿನಲ್ಲಿ ಮನೆಗೆ ಬಂದ ಅಪರಿಚಿತ  ಅಪಹರಣಾಕಾರರು ಮಲಗಿದ್ದ ಮಗುವನ್ನು ಅಪಹರಿಸಿಕೊಂಡು […]