ಉಡುಪಿ: ಮುಚ್ಚಿಟ್ಟ ದಲಿತ ಚರಿತ್ರೆ ಕೃತಿ ಬಿಡುಗಡೆ: ಲೇಖಕರ ಜತೆ ಸಂವಾದ
ಉಡುಪಿ: ಲೇಖಕ ರಾಕೇಶ್ ಶೆಟ್ಟಿ ಅವರ ಕೃತಿ ಮುಚ್ಚಿಟ್ಟ ದಲಿತ ಚರಿತ್ರೆ ಕೃತಿಯ ಸಾಂಕೇತಿಕ ಬಿಡುಗಡೆ ಹಾಗೂ ಲೇಖಕರ ಜೊತೆ ಸಂವಾದ ಕಾರ್ಯಕ್ರಮ ಶನಿವಾರ (ಸೆ.5) ಉಡುಪಿ ಅಂಬಲಪಾಡಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ನಲ್ಲಿ ನಡೆಯಿತು. ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರಿಗೆ ಸರಿಸಮನಾಗಿ ದಲಿತರ ಪರ ಜೋಗೇಂದ್ರನಾಥ ಅವರು ಬಹಳ ಹಿಂದೆ ಹೋರಾಟ ನಡೆಸಿದ್ದರು. ಆದರೆ ಅವರ ಬಗ್ಗೆ ಇತಿಹಾಸದಲ್ಲಿ ಯಾವುದೇ ಉಲ್ಲೇಖವಿಲ್ಲ. ಜೋಗೇಂದ್ರನಾಥ್ ಕುರಿತಾದ […]