ಉಡುಪಿ: ಚಾಲನಾ ತರಬೇತಿ ಉದ್ಘಾಟನೆ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದ ಶ್ರೀನರಸಿಂಹತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಮಹಾಸಂಘಗಳ ಒಕ್ಕೂಟದ ವತಿಯಿಂದ ಚಾಲನಾ ತರಬೇತಿಯನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.ಒಕ್ಕೂಟದ ಕಾರ್ಯದರ್ಶಿ ಜಗದೀಶ್ ,ಸರಕಾರದಿಂದ ಸಿಗುವ ಸೌಲಭ್ಯಗಳು ವಿಳಂಬವಾಗುತ್ತಿರುವದರಿಂದ ತಾವೇ ವಿಕಲಚೇತನರಿಗೆ ಉಚಿತವಾಗಿ ತ್ರಿಚಕ್ರವಾಹನದ ತರಬೇತಿಯನ್ನು ನೀಡಿ,ಅವರನ್ನು ಬಾಹ್ಯ ಪ್ರಪಂಚಕ್ಕೆ ಕರೆತರುವಲ್ಲಿ ಸಹಕರಿಸಿ,ಮಾತ್ರವಲ್ಲದೆ ವಾಹನದ ಕಂಪೆನಿಯಿಂದ ತಪಾಸಣೆ ನಡೆಸುವಲ್ಲಿ ಒಕ್ಕೂಟ ಮತ್ತು ಇಲಾಖೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸ್ವರ ಕಂಠೀರವ ಕಾರ್ಯಕ್ರಮ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ,ಮಧುರ ತರಂಗ ಮಂಗಳೂರು ಇವರು ಆಯೋಜಿಸಿರುವ ಜೂನಿಯರ್ ರಾಜಕುಮಾರ್ ಜಗದೀಶ್ ಶಿವಪುರ ಇವರ ಸಂಗೀತ ಕ್ಷೇತ್ರದ ಐದು ದಶಕಗಳ ಸಾಧನೆಯ ಸುವರ್ಣಮಹೋತ್ಸವ “ಸ್ವರ ಕಂಠೀರವ” ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಠದ ದಿವಾನರಾದ ಶಿಬರೂರು ವೇದವ್ಯಾಸ ತಂತ್ರಿ,ಜಗದೀಶ್ ಶಿವಪುರ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಕೃಷ್ಣ ಮಠ:”ಸಂಸ್ಕಾರ ಪ್ರದೀಪ” ಬಿಡುಗಡೆ

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ,ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ವಿಂಶತ್ಯುತ್ಸವದಲ್ಲಿ ‘ಷೋಡಶ ಸಂಸ್ಕಾರ’ ಗಳ ಕುರಿತು ಹಲವಾರು ಪುರೋಹಿತ ವಿದ್ವಾಂಸರಿಂದ ಪುರೋಹಿತಗೋಷ್ಠಿಗಳನ್ನು ನಡೆಸಲು ಅವಕಾಶವನ್ನಿತ್ತು ಅನುಗ್ರಹ ಸಂದೇಶವನ್ನು ನೀಡಿ ಪ್ರೋತ್ಸಾಹಿಸಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು “ಸಂಸ್ಕಾರ ಪ್ರದೀಪ” ಎಂಬ ಗ್ರಂಥವನ್ನು ಬಿಡುಗಡೆಗೂಳಿಸಿ ಅನುಗ್ರಹಿಸಿದರು. ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಹರಸಿದರು.ರಾಜ್ಯ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಶುಭ ಹಾರೈಸಿದರು.ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ ಶ್ರೀ ಕೆ.ರಾಮದಾಸ್ ಭಟ್ […]
ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ: ಲಾ೦ಛನ ಅನಾವರಣ

ಉಡುಪಿ: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕುಣಿಬೆ೦ಚಿ ಗ್ರಾಮದಲ್ಲಿ ಇದೇ ತಿ೦ಗಳ ಅಕ್ಟೋಬರ್ 20ರ೦ದು ಉಡುಪಿಯ ಪೇಜಾವರ ಮಠಾಧೀಶರಿ೦ದ ಉದ್ಘಾಟನೆಗೊಳ್ಳಲಿರುವ “ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ(ರಿ)ನ ಲಾ೦ಛನವನ್ನು ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಬುಧವಾರದ೦ದು ಅನಾವರಣಗೊಳಿಸಿದರು. ಸ೦ಘದ ಅಧ್ಯಕ್ಷರಾದ ಶೇಖರ ಮ೦ಗಳಗುಡ್ಡ,ಉಪಾಧ್ಯಕ್ಷರಾದ ಹನುಮ೦ತ ಬೇನಾಳ, ಸದಸ್ಯರಾದ ಮ೦ಜುನಾಥ ಮ೦ಗಳಗುಡ್ಡ, ಪ್ರದೀಪ್ ಬಿಶೆಟ್ಟಿ, ಹೊನ್ನಪ್ಪಬಿಶೆಟ್ಟಿ, ಮಠದ ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಮಧುಸೂದನ ಆಚಾರ್ಯ, ಗುರುರಾಜ ಆಚಾರ್ಯ ಹಾಗೂ […]
ಶ್ರೀ ಕೃಷ್ಣ ಮಠ: ಅನುಗ್ರಹ ಸಂದೇಶ ಕಾರ್ಯಕ್ರಮ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥಪೀಠಮ್ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಎಂಟನೇ ದಿನದಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಸಮಾರಂಭದಲ್ಲಿ ನಾಡೋಜ ಡಾ.ಜಿ.ಶಂಕರ್, ಭುವನೇಂದ್ರ ಕಿದಿಯೂರು, ಆನಂದ ಸಿ.ಕುಂದರ್, ಹರಿಯಪ್ಪ ಕೋಟಿಯಾನ್, ವಿದ್ವಾನ್ ಮಧೂರು ಬಾಲಸುಬ್ರಮಣ್ಯ, ಪ್ರತಿಭಾ ಸಾಮಗ, ಭೋಜರಾಜ ಕಿದಿಯೂರು, ಜಯಚಂದ್ರ ಐ.ಕೆ, ವಿಷ್ಣು ಆರ್. ಆಚಾರ್ಯ, […]