ನ. 27 ರಂದು ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ
ಕುಂದಾಪುರ: ನ.27 ರಂದು ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಬೆಳಿಗ್ಗೆ 11.30 ಕ್ಕೆ ಜರಗಲಿದೆ. ರಾತ್ರಿ 8 ಗಂಟೆಗೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲದ ಕಲಾವಿದರಿಂದ ನೃತ್ಯ ವರ್ಷಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನ. 28 ರಂದು ಚೂರ್ಣೋತ್ಸವ, ಅವಭೃತ ಸ್ನಾನ ರಾತ್ರಿ ಓಕುಳಿ ಸೇವೆ ನಡೆಯಲಿದೆ. ವಿದುಷಿ ಭಾಗೀರಥಿ ಎಂ ರಾವ್ ಶಿಷ್ಯ ವೃಂದದವರಿಂದ ನೃತ್ಯ ಸೌರಭ ಕಾರ್ಯಕ್ರಮ ಜರಗಲಿದೆ.