ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಧ್ವಜ ಮರ ಮೆರವಣಿಗೆಯ ಅಬ್ಬರ: ಪುಳಕದಲ್ಲಿ ಮಿಂದೆದ್ದ ಭಕ್ತ ಸಾಗರ
-ಶ್ರೀಕಾಂತ ಹೆಮ್ಮಾಡಿ ಕುಂದಾಪುರ: ಕುಂದಾಪುರ ತಾಲೂಕಿನ ಕೋಟೆಶ್ವರ ಆಸುಪಾಸಿನ ಗ್ರಾಮಗಳಲ್ಲಿ ಸಂಭ್ರಮದ ವಾತಾವರಣ. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತವೃಂದ. ಪಂಚ ವಾದ್ಯಗಳ ಜಯಘೋಷ. ತಟ್ಟಿರಾಯಗಳ ಕುಣಿತ…ಈ ಪುರಮೆರವಣಿಗೆಯಲ್ಲಿ ಸಾಗಿಬಂದಿದ್ದು ಧ್ವಜಮರ. ಐತಿಹಾಸಿಕ ಕ್ಷಣವೊಂದಕ್ಕೆ ಈ ಕೋಟಿಲಿಂಗೇಶ್ವರನ ಸನ್ನಿಧಿ ಸಾಕ್ಷಿಯಾಯಿತು. ಒಂದು ಸಾವಿರದ ಇನ್ನೂರು ವರ್ಷಗಳ ಇತಿಹಾಸ ಇರುವ ಧ್ವಜಪುರ ಖ್ಯಾತಿಯ ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರನ ಮಹಿಮೆ ಅಪಾರ. ರಾಜ್ಯದ ಅತಿ ದೊಡ್ಡ ಜಾತ್ರೆಯ ಪೈಕಿ ಈ ಕ್ಷೇತ್ರದಲ್ಲಿ ನಡೆಯುವ ಕೊಡಿ ಹಬ್ಬಕ್ಕೆ ವಿಶಿಷ್ಟ ಮಹತ್ವವಿದೆ. […]