ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕೋಟಿಕಂಠ ಗಾಯನ

ಕಾರ್ಕಳ: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನನ್ನ ಹಾಡು ನನ್ನ ನಾಡು ಶೀರ್ಷಿಕೆಯಡಿ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಗಿತ್ತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಮಾಹೆಯ ಅಡ್ಮಿನಿಸ್ಟ್ರೇಟಿವ್ ಶ್ರೀನಿಧಿ ಕಾಮತ್, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ರಾವ್ ಯು, ಉಪ ಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು, […]

ಮೆಸ್ಕಾಂ ಸಿಬ್ಬಂದಿಗಳಿಂದ ಕೋಟಿ ಕಂಠ ಗಾಯನ

ಉಡುಪಿ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯರವರ ಮಾರ್ಗ ದರ್ಶನದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಶುಕ್ರವಾರದಂದು ಉಡುಪಿ ಮೆಸ್ಕಾಂ ಕಚೇರಿ ಆವರಣದಲ್ಲಿ ನಡೆಯಿತು. ಮಹಿಳೆಯರು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ಕನ್ನಡ ಭಾಷೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೆ ಪ್ರಸನ್ನಕುಮಾರ್, ಗಣರಾಜ್ ಭಟ್ ಹಾಗೂ ವಿವಿಧ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕುಂದಾಪುರ: ಕೋಟಿ ಕಂಠ ಗಾಯನಕ್ಕೆ ದನಿಗೂಡಿಸಿದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು

ಕುಂದಾಪುರ: ನಾಡು ನುಡಿಯ ಬಗ್ಗೆ ಅಭಿಮಾನ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸಿದ ‘ಕೋಟಿ ಕಂಠ ಗೀತಗಾಯನ’ ಕಾರ್ಯಕ್ರಮವನ್ನು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಸಭಾಂಗಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪ್ರಾಂಶುಪಾಲರನ್ನು ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು. ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ಧರಿಸಿ ಶಿಸ್ತು ಬದ್ಧವಾಗಿ ಸರ್ಕಾರವು ನಿಗದಿಪಡಿಸಿದ ಜಯಭಾರತ ಜನನಿಯ ತನುಜಾತೆ, ಉದಯವಾಗಲಿ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಂಡಿಮವ, ಹಚ್ಚೇವು ಕನ್ನಡದ ದೀಪ , ವಿಶ್ವವಿನೂತನ […]

ಸಮುದ್ರ ಮಧ್ಯದಿಂದಲೂ ಮೊಳಗಿತು ಕನ್ನಡಾಭಿಮಾನ: ದೋಣಿಯಲ್ಲಿ ನಿಂತು ಕೋಟಿ ಕಂಠ ಗಾಯನ

ಮಲ್ಪೆ: ಈ ಬಾರಿಯ ರಾಜ್ಯೋತ್ಸವ ಸಂದರ್ಭದಲ್ಲಿ ನಾಡು ನುಡಿಯ ಜಾಗೃತಿಗಾಗಿ ಕೋಟಿ ಕಂಠ ಗಾಯನವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಂತ ಕಚೇರಿ ಕಟ್ಟಡ ಮೈದಾನವೆನ್ನದೆ ಎಲ್ಲೆಲ್ಲೂ ಕನ್ನಡದ ಶಂಖನಾದ ಮೊಳಗಿದೆ. ಈ ಉತ್ಸಾಹ ಕೇವಲ ನೆಲಕ್ಕೆ ಮಾತ್ರ ಸೀಮಿತವಾಗಿರದೆ ಸಾಗರದ ಮಧ್ಯೆಯೂ ಕನ್ನಡದ ಡಿಂಡಿಮವನ್ನು ಬಾರಿಸಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್, ಮಹಾಲಕ್ಷ್ಮೀ ಕೋ.ಆಪರೇಟಿವ್ ಬ್ಯಾಂಕ್ ಉಡುಪಿ, ಉಡುಪಿ ಜಿಲ್ಲಾಡಳಿತ ಮತ್ತು ಮಲ್ಪೆ ಮೀನುಗಾರರ ಸಂಘದ ಸಹಕಾರದೊಂದಿಗೆ ಮಲ್ಪೆಯ ಸಮುದ್ರ ಮದ್ಯದಲ್ಲಿ ಹತ್ತಾರು ದೋಣಿಗಳನ್ನು […]

ಬ್ರಹ್ಮಾವರ: ವಿದ್ಯಾಲಕ್ಷ್ಮಿ ಸಮೂಹ ಸಂಸ್ಥೆಯಲ್ಲಿ ಕೋಟಿ ಕಂಠ ಗಾಯನ

ಬ್ರಹ್ಮಾವರ: 67 ನೇ ಕರ್ನಾಟಕ ರಜ್ಯೋತ್ಸವದ ಪ್ರಯುಕ್ತ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾದ ಕೋಟಿ ಕಂಠ ಗಾಯನದಲ್ಲಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಾಪಕ ವೃಂದದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡರು. ವಿದ್ಯಾರ್ಥಿಗಳಿಗೆ ನಾಡು ನುಡಿ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಅರಿವು ಮೂಡಿಸಿ ಸಂಕಲ್ಪ ವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಹಾಗೂ ನಿರ್ದೇಶಕಿ ಶ್ರೀಮತಿ ಮಮತಾ ಮತ್ತು ಪ್ರಾಂಶುಪಾಲೆ ಶ್ರೀಮತಿ ಸೀಮಾ ಭಟ್ ಉಪಸ್ಥಿತರಿದ್ದರು.