ಕೋಟ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೂರು ತಿಂಗಳ ಗರ್ಭಿಣಿ ದನ ಕಳವು
ಉಡುಪಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಮೂರು ತಿಂಗಳ ಗರ್ಭಿಣಿ ದನವನ್ನು ಗೋಕಳ್ಳರು ಕದ್ದೊಯ್ದ ಘಟನೆ ಕೋಟ ಸಮೀಪದ ಗುಳ್ಳಾಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಗುಳ್ಳಾಡಿ ಗ್ರಾಮದ ಮಂಜಿ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನದ ಹಗ್ಗವನ್ನು ಕತ್ತರಿಸಿಕೊಂಡು ಕಳವು ಮಾಡಲಾಗಿದೆ. ಮಂಜಿ ತೀರ ಬಡವರಾಗಿದ್ದು, ಸೊಸೆ ಹಾಗೂ ಮೊಮ್ಮಗಳೊಂದಿಗೆ ವಾಸವಿರುವ ಅವರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದರು. ಇದೀಗ ಇದ್ದ ಗೋವನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದ್ದಾರೆ. ಈ ಬಗ್ಗೆ ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋ ಕಳ್ಳರ […]