ಕೋಟತಟ್ಟು ಗ್ರಾಮದಲ್ಲಿ ಹೆಜ್ಜೇನು ದಾಳಿ; ಮೂವರಿಗೆ ಗಾಯ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರಿಕೆರೆಯಲ್ಲಿ ಹೆಜ್ಜೇನು ದಾಳಿಯಿಂದ ಮೂವರು ಗಾಯಗೊಂಡ ಘಟನೆ ಸಂಭವಿಸಿದೆ. ಹೆಜ್ಜೇನು ದಾಳಿಗೊಳಗಾದ ಪಂಚಾಯತ್ ಅಧ್ಯಕ್ಷ ಸತೀಶ್ ಬಿ. ಕುಂದರ್, ಉಪಾಧ್ಯಕ್ಷೆ ಸರಸ್ವತಿ ಹಾಗೂ ಅವರ ಮಗಳು ಸೌಜನ್ಯ ಎಂದು ಗುರುತಿಸಲಾಗಿದೆ. ಸರಸ್ವತಿ ಹಾಗೂ ಸೌಜನ್ಯ ಕಲ್ಮಾಡಿ ರಸ್ತೆಯಲ್ಲಿರುವ ನಾಗಬನಕ್ಕೆ ಹೋದ ಸಂದರ್ಭ ಹೆಜ್ಜೇನು ಹಿಂಡೊಂದು ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಾಗ ಅವರ ಸಹಾಯಕ್ಕೆ ದಾವಿಸಿದ್ದ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಅವರು ಕೂಡ ಜೇನು ನೊಣಗಳ […]