ದಲಿತ ಮಹಿಳೆಯ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಉಡುಪಿಯ ಕೊರಗರ ಕಾಲೊನಿಯಲ್ಲಿ ಗೋಪೂಜೆ ಮಾಡಿದರು. ಉಡುಪಿ ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲೊನಿಯಲ್ಲಿ ದಲಿತ ವಿಧವೆ ಕಮಲಮ್ಮ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ 50ಕ್ಕೂ ಹೆಚ್ಚು ಶುದ್ಧ ದೇಶಿ ಹಸುಗಳನ್ನು ಪೋಷಿಸುತ್ತಿದ್ದಾರೆ. ಯಾವುದೇ ಲಾಭದ ಉದ್ದೇಶವಿಲ್ಲದೇ ನಡೆಸುತ್ತಿರುವ ಈ ಗೋಶಾಲೆಗೆ ದೀಪಾವಳಿ ಪ್ರಯುಕ್ತ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗೋಪೂಜೆ ನೆರವೇರಿಸಿದರು. ಗೋವಿನ ಪಾದಕ್ಕೆ ನೀರೆರೆದು, ಹಣೆಗೆ ತಿಲಕವಿಟ್ಟು, ಮೈಮೇಲೆ […]