ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ಆ್ಯಂಬುಲೆನ್ಸ್, ಐಸಿ ಘಟಕ ನೀಡಲು ಸರ್ಕಾರ ಸಿದ್ಧ: ಸಚಿವ ಕೋಟ

ಉಡುಪಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ಆ್ಯಂಬುಲೆನ್ಸ್, ಐಸಿ ಘಟಕಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಬೇಡಿಕೆ ಅನುಗುಣವಾಗಿ ಆ್ಯಂಬುಲೆನ್ಸ್, ಐಸಿ ಘಟಕ ನೀಡಲಾಗುವುದು ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮೀನುಗಾರರಿಗೆ ವಿವಿಧ ಸೌಲಭ್ಯ  ಓದಗಿಸುವ ಕುರಿತು ಸಚಿವರ ಅಧ್ಯಕ್ಚತೆಯಲ್ಲಿ ಸಭೆ

ಕಾರವಾರ: ಮೀನುಗಾರರ ಹಾಗೂ ಮೀನುಗಾರ ಮಹಿಳೆಯರ ಸಮಸ್ಯೆಗಳ ಕುರಿತು  ಶೂನ್ಯ ಬಡ್ಡಿದರ ಸಾಲ  ಹಾಗೂ ಕಿಸಾನ ಕಾರ್ಡ ಯೋಜನೆಗೆ ಸಂಭಂದಿಸಿದಂತೆ ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವರಾದ ಶ್ರೀ ಕೋಟಾ ಶ್ರಿನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಯಿತು. ಶೇಕಡಾ ಶೂನ್ಯ ಬಡ್ಡಿದರದಲ್ಲಿ ಎಲ್ಲ ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ಮೀನುಗಾರರಿಗೆ ಸರ್ಕಾರ ಒದಗಿಸುತ್ತಿರುವ ಯೋಜನೆಗಳ ಕುರಿತು ಮಾಹಿತಿಯನ್ನು ತಲುಪಿಸಬೇಕು. ಸಾಲ ಪಡೆಯಲು ಅರ್ಹರಾಗಿರುವವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಅರ್ಜಿಯನ್ನು ವಿಲೇವಾರಿ ಮಾಡಿ ಸಾಲ […]

ಕೊರೋನಾ ಮಹಾಮಾರಿಯಿಂದಾಗಿ ಯಾರೂ ಕೂಡ ನೆಮ್ಮದಿಯಿಂದ ನಿದ್ದೆಮಾಡುತ್ತಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಕೊರೋನಾ ಮಹಾಮಾರಿಯಿಂದಾಗಿ ಯಾರೂ ಕೂಡ ನೆಮ್ಮದಿಯಿಂದ ನಿದ್ದೆಮಾಡುತ್ತಿಲ್ಲ. ನಮ್ಮನ್ನೂ ಸೇರಿದಂತೆ ನೀವೆಲ್ಲರೂ ಶ್ರಮವಹಿಸಿ ದುಡಿಯುತ್ತಿದ್ದೀರಿ. ಅಧಿಕಾರಿಗಳು ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ದಿನನಿತ್ಯ ನನಗೆ ಸಾವಿರಾರು ಕರೆಗಳು ಬರುತ್ತಿವೆ. ಈ ವೇಗದಲ್ಲಿ ಹೋದರೆ ಏನು ಕೆಲಸವಾಗಲಿಕ್ಕಿಲ್ಲ. ಯುದ್ದ ಎದುರಿಸಿದ ಹಾಗೆ ಕೆಲಸ ಮಾಡಿ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ಎರಡು ದಿನಗಳ ಹಿಂದೆ ಕುಂದಾಪುರ, ಬೈಂದೂರು ಕ್ವಾರಂಟೈನ್ ಸೆಂಟರ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೋಟ […]

ಮದ್ಯ ಮಾರಾಟ ಅಧಿಕ ದರ ವಸೂಲಿ ಮಾಡಿದರೆ ಲೈಸನ್ಸ್ ರದ್ದು: ಸಚಿವರ ಎಚ್ಚರಿಕೆ

ಮಂಗಳೂರು: ಜಿಲ್ಲೆಯ ಮದ್ಯದಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ  ದೂರು ಬರುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಅಧಿಕ ದರ ವಸೂಲಿ ಮಾಡುವ ಪ್ರಕರಣ ಕಂಡು ಬಂದರೆ  ಅಂತಹ ಮದ್ಯದಂಗಡಿಗಳ ಪರವಾನಿಗೆ ರದ್ದುಪಡಿಸಲು ಸೂಚನೆ ನೀಡಿದರು. ಈ ಬಗ್ಗೆ ಅಬಕಾರಿ ಅಧಿಕಾರಿಗಳು ಎಲ್ಲಾ ಮದ್ಯದಂಗಡಿಗಳ […]

ಅಬ್ಬಕ್ಕ‌ ಆದರ್ಶ ಪಾಲಿಸಿದವರಿಗೆ ಪ್ರಶಸ್ತಿ: ಸಚಿವ ಕೋಟ

ಉಡುಪಿ: ಅಬ್ಬಕ್ಕ ರಾಣಿಯ ಪೌರುಷ ಹಾಗೂ ಆದರ್ಶ ಪಾಲಿಸಿದ ಮಹಿಳಾ ಸಾಧಕರಿಗೆ ಈ ವರ್ಷದ ವೀರನಾರಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಬ್ಬಕ್ಕ‌ ಉತ್ಸವ – 2020 ರ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು. ಮುಂದಿನ ವರ್ಷದಿಂದ ಅಬ್ಬಕ್ಕ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಮಾನದಂಡಗಳನ್ನು ರಚಿಸಲಾಗುವುದು. ಅಲ್ಲದೇ,‌ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು. ಅಬ್ಬಕ್ಕ ಉತ್ಸವ […]