ವೆಂಟನ ಫೌಂಡೇಶನ್ ವತಿಯಿಂದ ಕೊರವಡಿ ಶಾಲೆಯ ಹೆಣ್ಣು ಮಕ್ಕಳ ಶೌಚಾಲಯ ನಿರ್ಮಾಣ-ಹಸ್ತಾಂತರ

ಉಡುಪಿ: ಕನ್ನಡ ಶಾಲೆಯ ಕುರಿತು‌ ಕೀಳರಿಮೆ‌ ಬೇಡ. ನಾನು ಸ್ವತಃ ಕನ್ನಡ ಮಾಧ್ಯಮ‌ ಶಾಲೆಯಲ್ಲಿ‌ ಕಲಿತಿದ್ದು ಕಠಿಣ‌‌ ಪರಿಶ್ರಮದಿಂದ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಯಿತು. ಶಿಕ್ಷಣದಲ್ಲಿ ಮಾಧ್ಯಮ‌ ಮುಖ್ಯವಲ್ಲ, ಜೀವನದಲ್ಲಿ‌ ಗುರಿ‌ ಹಾಗೂ ಅದಕ್ಕೆ ಪೂರಕವಾದ ಪರಿಶ್ರಮವಿದ್ದರೆ ಯಾವುದೂ ಅಸಾಧ್ಯವಲ್ಲ. ಹೆಣ್ಣು‌ ಮಕ್ಕಳು ವೈಯಕ್ತಿಕ ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಈ ಶೌಚಾಲಯವನ್ನು ಹಲವಾರು ಹೆಣ್ಣು‌ ಮಕ್ಕಳಿಗೆ ಅನುಕೂಲವಾಗಲೆಂದು ನಮ್ಮ ಫೌಂಡೇಶನ್ ಮೂಲಕ ನಿರ್ಮಿಸಲಾಗಿದೆ. ಇದರ ಮುಂದಿನ‌ ನಿರ್ವಹಣೆ ನಿಮ್ಮೆಲ್ಲರ‌ ಜವಾಬ್ದಾರಿಯಾಗಿದೆ ಎಂದು ಉಡುಪಿ ವೆಂಟನ […]